Tuesday, November 1, 2022

ನಮೋ ವಿದ್ಯಾನಿಧಿ ಸ್ಟಾಲರ್‌ಪ್‌ ಯೋಜನೆ - 200 ವಿದ್ಯಾರ್ಥಿಗಳಿಗೆ ಸಾಲರ್‌ಶಿಪ್‌ ವಿತರಣೆ

GREAT OFFERS & DISCOUNTS 4 U IS WAITING HERE :


200 ವಿದ್ಯಾರ್ಥಿಗಳಿಗೆ ಸಾಲರ್‌ಶಿಪ್‌ ವಿತರಣೆ ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ 'ನಮೋ ವಿದ್ಯಾನಿಧಿ ಸ್ಟಾಲರ್‌ಪ್‌ ಯೋಜನೆಯಡಿ 200 ವಿದ್ಯಾರ್ಥಿಗಳಿಗೆ 10 ಸಾವಿರ ರೂ. ವಿದ್ಯಾರ್ಥಿವೇತನ ವಿತರಿಸಲಾಗಿದೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗಲೆಂದು ಈ ಯೋಜನೆ ರೂಪಿಸಲಾಗಿದೆ. ಜಯನಗರದ 4ನೇ ಹಂತದಲ್ಲಿರುವ ತಮ್ಮ ಕಚೇರಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ 38 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಬೆಂಗಳೂರು ಸೇಸ್ ಎಜುಕೇಶನ್ - ಸೋಷಿಯಲ್ ಟ್ರಾನ್ಸ್‌ಫಾರ್ಮನ್ ಯೋಜನೆ ಅಂಗವಾಗಿ ಈ ಸ್ಕಾಲರ್ ಶಿಪ್‌ ಆರಂಭಿಸಲಾಗಿದೆ. ಪ್ರೌಢಶಾಲೆಯ 8, 9, 10ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ. ವಿದ್ಯಾನಿಧಿ ಸ್ಕಾಲರ್ ಶಿಪ್‌ ಆರಂಭಗೊಂಡು 6 ತಿಂಗಳಾಗಿದ್ದು, ಇದುವರೆಗೆ 190 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ, ಪೌರ ಕಾರ್ಮಿಕರು, ಏಕ ವ್ಯಕ್ತಿ ಪಾಲಕರನ್ನು ಹೊಂದಿರುವ ಮಕ್ಕಳಿಗೆ ವಿತರಿಸಲಾಗಿದೆ.

No comments:

Post a Comment

VIDEO ZAMANA